
About Us
- Home
- Page

ಮರನನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತ್ತಲಿದ್ದೇನೆ,ಬೆಂದ ಮನವ ನಾನೆಂತು ನಂಬುವೆನಯ್ಯಾಎಂತು ನಚ್ಚುವೆನಯ್ಯಾಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ.
From the beginning our mission to spread the ideologies and teachings of 12th century social reformer Basaveshwara and put them into practice.
Merely reciting the vachanas of Basaveshwara and other Vachanakaras will not help bring in reforms.

“ಬಸವಣ್ಣನವರ ಬೋಧನೆಗಳು ಪ್ರಮುಖವಾಗಿ ದೇವರೆಡೆಗೆ ವ್ಯಕ್ತಿಗತ ಭಕ್ತಿ ಹಾಗೂ ವೈಯಕ್ತಿಕ ಚಾರಿತ್ರ್ಯಗಳು ಢಾಂಬಿಕ ಆಚರಣೆಗಳು ಮತ್ತು ಜಾತಿ ಪದ್ಧತಿಗಿಂತ ಮುಖ್ಯವಾದವು ಎಂದು ಸಾರಿದ್ದವು. ಅವರು ಎಲ್ಲ ಮನುಷ್ಯರೂ ಸಮಾನರು ಎಂದು ಸಾರಿ, ಜಾತಿಗಳ ಆಧಾರದಿಂದ ಒಬ್ಬರು ಮೇಲು, ಇನ್ನೊಬ್ಬರು ಕೀಳು ಎನ್ನುವುದು ನೈತಿಕವಾಗಿ ತಪ್ಪು ಎಂದು ಸಾರಿದರು. ಅವರು ಮಹಿಳಾ ಅಭಿವೃದ್ಧಿ ಮತ್ತು ವರದಕ್ಷಿಣೆ ಪಿಡುಗಿನ ನಿಷೇಧಕ್ಕಾಗಿ ಹೋರಾಡಿದರು.
ಬಸವಣ್ಣನವರನ್ನು ಬಹುಶಃ ಅವರು ಅನುಭವ ಮಂಟಪವನ್ನು ಸ್ಥಾಪಿಸಿದ್ದಕ್ಕಾಗಿ ಸದಾ ಸ್ಮರಿಸಲಾಗುತ್ತದೆ. ಅನುಭವ ಮಂಟಪದಲ್ಲಿ ಎಲ್ಲಾ ಜಾತಿ, ಸಮುದಾಯ, ಹಿನ್ನೆಲೆಗಳ ಜನರು ಭಾಗವಹಿಸಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿದ್ದ ಮಧ್ಯಕಾಲೀನ ಭಾರತದಲ್ಲಿ ಜಾತಿಗಳ ಆಧಾರದಲ್ಲಿ ಕೆಳವರ್ಗಗಳ ಜನರನ್ನು ಧಾರ್ಮಿಕ, ಶೈಕ್ಷಣಿಕ ಜ್ಞಾನಗಳಿಂದ ಹೊರಗಿಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಎಲ್ಲಾ ಜಾತಿ, ಅಂತಸ್ತುಗಳ ಜನರನ್ನು ಒಳಗೊಂಡು, ಅವರ ಅನುಭವ, ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಅನುಭವ ಮಂಟಪ ಒಂದು ಕ್ರಾಂತಿಕಾರಿ ವ್ಯವಸ್ಥೆಯಾಗಿತ್ತು.
ಜಗಜ್ಯೋತಿ, ಕ್ರಾಂತಿಕಾರಿ, ಸಮಾನತೆಯ ಹರಿಕಾರ ಬಸವಣ್ಣನ ಮತ್ತು ಶರಣರ ಪ್ರತಿಮೆಗಳನ್ನ ಮನೆ ಮನೆಗೆ ಕೊಂಡೊಯುವದು ನಮ್ಮ ಉದ್ದೇಶ ಬಸವ ಮತ್ತು ನಮ್ಮ ಸಣ್ಣ ಅಭಿಯಾನ”
– PASODI, CEO
Inspired By You
“ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ,ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ,ಎನ್ನ ಮಾನಾಪಮಾನವೂ ನಿಮ್ಮದಯ್ಯಾ,ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.”
“ಹಾವು ತಿಂದವರ ನುಡಿಸಬಹುದು,ಗರ ಹೊಡೆದವರ ನುಡಿಸಬಹುದು,ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ.ಬಡತನವೆಂಬ ಮಂತ್ರವಾದಿ ಹೊಗಲುಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ.”
“ದಯವಿಲ್ಲದ ಧರ್ಮವದೇವುದಯ್ಯಾದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.ದಯವೇ ಧರ್ಮದ ಮೂಲವಯ್ಯಾ,ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ”

Behind The Brand
“ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ,ಮತ್ತಾರೂ ಇಲ್ಲ, ಹರಹರಾ, ನೀನೆ ಕಂಡಯ್ಯಾ,ಎನ್ನ ಮಾತಾಪಿತನು ನೀನೆ ಕಂಡಯ್ಯಾ.ಕೂಡಸಂಗಮದೇವಾ.”